Saturday 31 August 2013

ನಡುರಾತ್ರಿಯಲೊಂದು ಕದನ

ಒಂದೊಮ್ಮೆ ಪದಗಳ ಸಾಲು ಬಿಡುವಿಲ್ಲದಂತೆನ್ನ  ಕಾಡಿಸಿ, ಕವಿತೆ ಬರೆಸಿದ ಕತೆ ಇದು.
ನಡುರಾತ್ರಿ ಸರಿದಿರಲು
ಕಣ್ಗೆ ನಿದಿರೆಯ ತೆವಲು
ಕರುಣೆ ಇಲ್ಲವೇ ಇವಕೆ
ನನ್ನ ಪದಗಳಿಗೆ
       ಒಂದೊಂದೇ ತಾ ಬಂದು
       ನನ್ನ ಲೇಖನಿ ತಂದು
       ಬರೆ ಎನ್ನುತಿವೆ ಇಂದು
       ಕವನವೊಂದು
ಕಣ್ರೆಪ್ಪೆ ಕದ ಮುಚ್ಚಿ
ಕೊಂಚ ನಿದಿರೆಯ ಬಾಚಿ
ಸುಪ್ತವಾಗಲು ಇನ್ನೇನೋ ತೋಚಿ
ಕೆಣಕುತಿವೆ ಪದ ಪುಂಜ
ತನ್ನಿರವ ಚಾಚಿ
       ಅತ್ತಿತ್ತ ಹೊರಳುತ್ತ
       ಹೊದಿಕೆಯನು ಬಳಸುತ್ತ
       ನಿದಿರೆಯಲಿ ಮೆಲ್ಲ ಜಾರುವ ಹೊತ್ತ
       ಕಂಡು ಮುತ್ತುವವು ನನ್ನ ಸುತ್ತ
ನಿದಿರೆ ಹೋದರೇನಂತೆ
ಬರೆದರೇ ನಿಶ್ಚಿಂತೆ
ಎಂದು ಬರೆಯಲು ಕುಳಿತೆ
ವಿದ್ಯಾರ್ಥಿಯಂತೆ........

2 comments:

  1. abha nidre madaku badalva padagalu...gud one bhavya:-)

    ReplyDelete
  2. Thanks raku :) haudu kelavu sala haageye. kelavu vishayagaLu taleyalli tumbikonDidre, nidraheenate khaatri :)

    ReplyDelete