ಉದ್ದುದ್ದ
ಮನೆಗಳು ಅಡ್ಡಡ್ಡ ಮನೆಗಳು
ಬರಿ ಭಾರಿ ಸಾಮಾನು ಇಲ್ಲಿಲ್ಲ
ಜನರು
ಪಿಸುಮಾತು
ಅಲ್ಲಿಲ್ಲ ಕಿಟಕಿಯಲಿ ಧೂಳು
ತೆರೆದು ಮುಚ್ಚುವರಿಲ್ಲ ಅವುಗಳಿಗೂ ಬೋರು
ಬಾನ ಚುಂಬಿಸುವಂತ
ಆಸೆ ಹೊತ್ತವರು
ಇಂಚಿಂಚು ಜಾಗದಲೂ ಗೋಡೆ ಕಟ್ಟಿದರು
ಗಾಳಿ ಬರದಿದ್ದರೂ ಕಿಟಕಿಗಳನಿಟ್ಟರು
ವಾಸ್ತು ನೋಡುತ ಕಲ್ಲ ಮೇಲೆ
ಕಲ್ಲಿಟ್ಟರು
ಅರಚಿದವು ಅಡಿಪಾಯ ತಾಳಲಾರೆನು ಗಾಯ
ಗಾಳಿ ಬೆಳಕಿಗೆ ಕಿರಿಚಿದಾ ಕಿಟಕಿ
ನಿರುಪಾಯ
ಕೆಮ್ಮಲಾರದೆ
ಬಿರಿದು ಗೋಡೆ ತಾ ಬಿಡೆ
ಬಾಯ
ಮನೆ ಕಟ್ಟಿದಾ ಮೇಸ್ತ್ರಿ
, ಇಂಜಿನಿಯರ್ ಮಾಯಾ
Regards,
Bhavya