ಹಗಲು ರಾತ್ರಿಗಳಲ್ಲಿ
ನಿದ್ರೆ ಕಳೆದೆಚ್ಚೆತ್ತ ಮನ
ಮತ್ತೆ ನಿದ್ರೆಯನು ಬಯಸುತಿಹುದು
ಏನಾಗಬೇಕೆಂಬ
ಬಯಕೆ
ಚಿಗುರುವ ಮೊದಲೆ
ಹೊದಿಕೆಯಡಿಯಲಿ
ಹೇಡಿ ಗೊರೆಯುತಿಹುದು
ಸುಖ ಸ್ವಪ್ನಗಳಾಚೆಯಲಿ
ಬದುಕ ಬಯಸದ ಬದುಕು
ಸ್ಫೂರ್ತಿಯನು
ಸವತಿಯೆಂದೆಣಿಸುತಿಹುದು
ಚೂರು ಬೆಳಕಲ್ಲಿಯು ತುಂಬ
ನೋಯುವ ಕಣ್ಣು
ನೆರಳಲ್ಲು
ಕರಿಗಾಜು ಬೇಡುತಿಹುದು
ನಿಮಿಷ ಗಳಿಗೆಯ
ಹಿಂದೆ
ಗಂಟೆ ನಿಮಿಷದ ಹಿಂದೆ
ಮೈಕೊಡವಿ ನಿಲದಂತೆ ನಡೆಯುತಿಹುದು
ಮನವೆ ನೀ ಸಹಕರಿಸಿ
ನಿದಿರೆಯನು
ಸಂಹರಿಸಿ
ಕಣ್ಗಳಿಗೆ ಲಂಚವನು
ಕೊಡಲುಬಹುದೆ?
No comments:
Post a Comment