ಹಾಡ ಮರೆತ ವೇಳೆಯಲ್ಲಿ
ಹುಟ್ಟಿದಂತ ಹಾಡಿದು
ಭಾವನೆಗಳೇ ಇಲ್ಲದೇನೆ
ಗೀಚಿದಂತ ಸಾಲಿದು
ತಂತಿ ಮುರಿದ ವೀಣೆಯಿಂದ
ಸ್ಫೂರ್ತಿ ಈ ಹಾಡಿಗೆ
ಬರದ ಸ್ವರಗಳಲ್ಲಿ ಹಾಡಿ
ಕೇಳಿಸಲಿ ಯಾರಿಗೆ
ಹಾಡುತ್ತಿದ್ದ ಕೋಗಿಲೆಯದು
ಮಂದ ಮಾರುತ ಸೋತಿತು
ಸುಡುವ ಸೂರ್ಯ ತೆರೆಗೆ ಸರಿದ
ಮತ್ತೆ ಕತ್ತಲಾಯಿತು
ಹುಟ್ಟಿದಂತ ಹಾಡಿದು
ಭಾವನೆಗಳೇ ಇಲ್ಲದೇನೆ
ಗೀಚಿದಂತ ಸಾಲಿದು
ತಂತಿ ಮುರಿದ ವೀಣೆಯಿಂದ
ಹೊರಳಿದಂತ ಸ್ವರವಿದು
ಚಂದಮಾಮನಿರದ ಬಾನ
ನೋಡಿ ಉಲಿದ ಪದವಿದು
ಬರೆಯಲಾಗದಂತ ಹಾಡೇ ಸ್ಫೂರ್ತಿ ಈ ಹಾಡಿಗೆ
ಬರದ ಸ್ವರಗಳಲ್ಲಿ ಹಾಡಿ
ಕೇಳಿಸಲಿ ಯಾರಿಗೆ
ಹಾಡುತ್ತಿದ್ದ ಕೋಗಿಲೆಯದು
ಕೇಳಿ ಈ ಹಾಡನು
ಹಾಡುವುದನು ಮರೆತು ಮತ್ತೆ
ಹಿಡಿಯಿತು ಮೌನದ ಜಾಡನು
ತೇಲಿ ಬರಲು ಈ ಹಾಡು ಮಂದ ಮಾರುತ ಸೋತಿತು
ಸುಡುವ ಸೂರ್ಯ ತೆರೆಗೆ ಸರಿದ
ಮತ್ತೆ ಕತ್ತಲಾಯಿತು
No comments:
Post a Comment