ಹಳೆ ಪ್ರೀತಿಗೊಂದು ಚಂದದ
ನೆನಪಿನ ಅಂಗಿ ಹೊಲಿದೆ
ಒಳ ತುರುಕಲಿಲ್ಲ ಪ್ರೀತಿ
ಗೊತ್ತಾಗಲಿಲ್ಲ ಪ್ರೀತಿ
ಆಕಾರ ಬದಲಿಸಿದ ರೀತಿ
ನನಗೇನು ಹಸಿವೆಗೆ ಕೂಳಿಲ್ಲವೆ
ಮಾತಿಗೆ ಆಳಿಲ್ಲವೆ
ಮಳೆಗೆ ಸೂರಿಲ್ಲವೆ
ಒರಗಿ ಬಿಕ್ಕಳಿಸಿ ಅಳಲು ತೋಳಿಲ್ಲವಷ್ಟೆ
ಭೂಮ್ಯಾಕಾಶಗಳ ಮಧ್ಯೆ ಒಬ್ಬಳೇ ನಿತ್ತು
ನೋಡುವುದ ಕಲಿತಿರುವೆ
ಮಗುವಂತೆ ಸೋತು
ಒಂಟಿ ಲ್ಯಾಂಟೀನದ ಸುತ್ತ
ಪತಂಗಗಳೆಷ್ಟಿದ್ದರೇನು
ಬೆಳಕು ಸೋಲುವುದೆ
ಎಣ್ಣೆ ತೀರಿದ ಬಳಿಕ ಲ್ಯಾಂಟೀನ
ಒಂಟಿ
No comments:
Post a Comment